ಕರ್ನಾಟಕ

karnataka

By

Published : May 1, 2020, 8:42 PM IST

ETV Bharat / videos

ತುಮಕೂರಲ್ಲಿ 1,917 ಜನರ ಕೋವಿಡ್ 19​​ ವರದಿ ನೆಗೆಟಿವ್: ಪ್ರತ್ಯಕ್ಷ ವರದಿ

ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯಲ್ಲಿ 1917 ಮಂದಿಯ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಇನ್ನೂ 182 ಜನರ ವರದಿ ನಿರೀಕ್ಷೆಯಲ್ಲಿದೆ. ಜಿಲ್ಲೆಯನ್ನು ಆರೆಂಜ್ ಝೋನ್ ಎಂದು ಸರ್ಕಾರ ಪರಿಗಣಿಸಿದೆ. ಈಗಾಗಲೇ ಐವರಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದರೆ, ಓರ್ವ ಗುಣಮುಖನಾಗಿದ್ದಾನೆ. ಇನ್ನಿಬ್ಬರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 587 ಮಂದಿ ಸರ್ಕಾರಿ ಆಸ್ಪತ್ರೆಯ ಐಸೊಲೇಷನ್​ ವಾರ್ಡ್‌ನಲ್ಲಿದ್ದಾರೆ. ತುಮಕೂರಿನ ಚಿತ್ರಣವನ್ನು ಈಟಿವಿ ಭಾರತ್ ಪ್ರತಿನಿಧಿ ಕಟ್ಟಿಕೊಟ್ಟರು.

ABOUT THE AUTHOR

...view details