ಚಳಿ ಮಧ್ಯೆ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆದ ಪ್ರಯಾಣಿಕರು
ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸಾರಿಗೆ ನೌಕರರು ಕರೆ ನೀಡಿರುವ ಬಸ್ ಮುಷ್ಕರಕ್ಕೆ ಪ್ರಯಾಣಿಕರು ಕಂಗಲಾಗಿದ್ದಾರೆ. ರಾಜಧಾನಿಯಿಂದ ನಗರ ಹಾಗೂ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್ಗಳಿಲ್ಲದೆ ಪರದಾಡುತ್ತಿದ್ದಾರೆ. ತಡರಾತ್ರಿವರೆಗೂ ಬಸ್ ಸಿಗುವ ಆಶಾಭಾವನೆಯಿಂದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಗಾಗಿ ಕಾದು ಸುಸ್ತಾಗಿ ಮಲಗಿದ ಘಟನೆ ನಡೆದಿದೆ. ಕೊರೊನಾ ಭೀತಿ ನಡುವೆಯೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ಕಳೆದಿರುವ ಪ್ರಯಾಣಿಕರು, ಚಳಿ ಮಧ್ಯೆ ಸರಿಯಾದ ಹೊದಿಕೆಯೂ ಇಲ್ಲದೇ ತೊಂದರೆ ಅನುಭವಿಸಿದ್ದಾರೆ.