ಮೊದಲ ಬಾರಿ ಮತ ಚಲಾಯಿಸಿದ ಲೈಂಗಿಕ ಅಲ್ಪಸಂಖ್ಯಾತರಿಗೆ ಖುಷಿಯೋ ಖುಷಿ...
ಕಲಬುರಗಿ: ಬಿರು ಬಿಸಿಲಿನ ನಡುವೆಯೂ ಮೊದಲ ಬಾರಿಗೆ ಲೈಂಗಿಕ ಅಲ್ಪ ಸಂಖ್ಯಾತರು ತಮ್ಮ ಹಕ್ಕನ್ನು ಚಲಾಯಿಸಿದರು. ಮಂಗಳವಾರ ನಡೆದ 2ನೇ ಹಂತದ ಮತದಾನದ ವೇಳೆ ಆಳಂದ ರಸ್ತೆಯಲ್ಲಿರುವ ಬೂತ್ ಸಂಖ್ಯೆ 32 ರಲ್ಲಿ 15 ಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರು ಮತ ಹಾಕಿದರು. ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಲ್ಲಿವರೆಗೆ ಮತದಾನ ಅಂದ್ರೆ ಹೇಗಿರುತ್ತೆ ಅನ್ನೋದೇ ಗೊತ್ತಿರಲಿಲ್ಲ. ನಮಗೆ ಪ್ರಥಮ ಬಾರಿಗೆ ಮತದಾನ ಹಕ್ಕು ಸಿಕ್ಕಿದ್ದು ಖುಷಿಯಾಗಿದೆ ಎಂದು ಈಟಿವಿ ಭಾರತನೊಂದಿಗೆ ಸಂತಸ ಹಂಚಿಕೊಂಡರು.
TAGGED:
kalaburagi