ವೀಳ್ಯದೆಲೆ ಪ್ರಿಯ ಶ್ರೀಬಂಟ... ಭಕ್ತರಿಗೆ ಬೇಡಿದ ವರವ ನೀಡ್ತಾನೆ ಈ ದೇವ್ರು...! - temple
ಕಾರವಾರದ ಅಮದಳ್ಳಿಯ ಕಿಳಕೋಣದ ಬೆಟ್ಟದ ತಪ್ಪಲಿನಲ್ಲಿ ಹಾಗೂ ಕೆಳಭಾಗದಲ್ಲಿ ದೊಡ್ಡ ಬಂಟ, ಸಣ್ಣ ಬಂಟ ಎಂಬ ಎರಡು ದೇವಾಲಯಗಳಿವೆ. ಎಲ್ಲ ದೈವಗಳಿಗೆ ಜಾತ್ರೆ, ಹಬ್ಬ ಹರಿದಿನದ ಸಂದರ್ಭದಲ್ಲಿ ಹೂ, ಹಣ್ಣು, ತೆಂಗಿನ ಕಾಯಿ, ನೈವೇದ್ಯ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯ ಸಂಗತಿ. ಆದರಿಲ್ಲಿ ವಿಶಿಷ್ಟವಾಗಿ ವೀಳ್ಯದೆಲೆ ಮತ್ತು ಅಡಕೆ ನೈವೇದ್ಯ ನೀಡಿ ಭಕ್ತರು ಕೃತಾರ್ಥರಾಗುತ್ತಾರೆ.