ಉತ್ತರಕರ್ನಾಟಕದ ಸಾಂಪ್ರದಾಯಿಕ ಆಚರಣೆ ಮಣ್ಣೆತ್ತಿನ ಅಮವಾಸ್ಯೆಗೆ ಭರದ ಸಿದ್ಧತೆ - mannethina amavasye
ಲಿಂಗಸುಗೂರು (ರಾಯಚೂರು) : ಜಿಲ್ಲೆಯ ಲಿಂಗಸುಗೂರು ಸೇರಿ ಉತ್ತರ ಕರ್ನಾಟಕ ಭಾಗದ ಬಹುತೇಕ ತಾಲೂಕುಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲು ಭರದಿಂದ ತಯಾರಿ ನಡೆದಿದೆ. ಹಿಂದೂ ಧರ್ಮದ ಹಬ್ಬಗಳಲ್ಲಿ ರೈತ ಮಹಿಳೆಯರು ಆಚರಿಸಲ್ಪಡುವ ಮಣ್ಣೆತ್ತಿನ ಅಮವಾಸ್ಯೆ ತನ್ನದೆ ಆದ ಐತಿಹ್ಯ ಪಡೆದಿದೆ. ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ರೈತ ಆಕಸ್ಮಿಕ ಮರಣ ಹೊಂದಿದ್ದ. ಆಗ ರೈತ ಮಹಿಳೆ ಭೂತಾಯಿ ಸೇವೆಯಲ್ಲಿದ್ದ ಗಂಡನನ್ನು ಬದುಕಿಸಲು ಮಣ್ಣಿನ ಎತ್ತು ಸಿದ್ಧಪಡಿಸಿ ಪೂಜೆ ಮಾಡಿ ಬದುಕಿಸಿಕೊಂಡು ಮುತ್ತೈದೆತನ ಉಳಿಸಿಕೊಂಡಳು ಎಂಬ ಪೌರಾಣಿಕ ಹಿನ್ನಲೆಯಲ್ಲಿ ಈ ಹಬ್ಬ ಮಹತ್ವ ಪಡೆದಿದೆ.