ಕೊರೊನಾ ಲಸಿಕೆ ಆಗಮನ: ಆರತಿ ಬೆಳಗಿ ಸ್ವಾಗತಿಸಿದ ಆರೋಗ್ಯ ಇಲಾಖೆ
ಧಾರವಾಡ: ಬೆಳಗಾವಿಯಿಂದ ಧಾರವಾಡ ಆರೋಗ್ಯ ಇಲಾಖೆ ಕಚೇರಿಗೆ ಆಗಮಿಸಿದ ಕೋ ವ್ಯಾಕ್ಸಿನ್ ವಾಹನಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಜಾನಪದ ಕಲಾವಿದರು ಹಾಡಿನ ಮೂಲಕ ಸ್ವಾಗತಿಸಿಕೊಂಡರು. ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಆರತಿ ಬೆಳಗಿ ಸ್ವಾಗತಿಸಿದರೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್ ವ್ಯಾಕ್ಸಿನ್ ವಾಹನದ ಕೀಲು ತೆಗೆದರು. ಬಳಿಕ ಐಎಲ್ಆರ್ಗೆ ವ್ಯಾಕ್ಸಿನ್ ಸ್ಥಳಾಂತರಗೊಂಡಿತು. ಜಿಲ್ಲೆಗೆ 11 ಸಾವಿರ ಲಸಿಕೆ ತಲುಪಿವೆ. ಜ.16 ರಂದು ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕೆ ವಿತರಸಿಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.