11 ನೇ ಶತಮಾನದ ಇತಿಹಾಸ ಇರೋ ಕೆರೆಯ ಸರ್ವೇಗೆ ವಿಘ್ನ ಎದುರಾಗಿದ್ದಾದರೂ ಯಾಕೆ...? - survey break
ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯ ಸರ್ವೇಗೆ ಆರಂಭದಲ್ಲೇ ವಿಘ್ನ ತಲೆದೋರಿದೆ. ಖಡ್ಗ ಸಂಘಟನೆಯು ಸತತ ಎರಡು ವರ್ಷಗಳ ಹೋರಾಟದ ಫಲವಾಗಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಚನ್ನಗಿರಿ ತಾಲೂಕಿನ ಸೂಳೆಕೆರೆ ಗ್ರಾಮದಲ್ಲಿ ಸಮಾರಂಭ ನಡೆಸಿ ಸೂಳೆಕೆರೆ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದ್ರೆ, ಅಧಿಕಾರಿಗಳು ಮಾತ್ರ ಇದ್ದಕ್ಕಿದ್ದಂತೆ ಸರ್ವೇ ಕಾರ್ಯ ನಿಲ್ಲಿಸಿರುವುದು ಅಚ್ಚರಿ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.