ಯಾವನಿಗಿದೆ ಕನ್ನಡ ಕಿತ್ತುಕೊಳ್ಳುವ ತಾಕತ್ತು, ಬರೋಕೇಳಿ ನೋಡೋಣ: ನಟ ಕಿಚ್ಚ ಸುದೀಪ್ - Actor Sudeep
ರಾಮನಗರ: ಕನ್ನಡವನ್ನ ಕಿತ್ತುಕೊಂಡವರು ಯಾರು, ಯಾರಿಗಿದೆ ಆ ಧೈರ್ಯ?. ಕನ್ನಡಕ್ಕಿರುವ ಇತಿಹಾಸ ಬೇರೆ ಯಾವ ಭಾಷೆಗೂ ಇಲ್ಲ ಎಂದು ನಟ ಕಿಚ್ಚ ಸುದೀಪ್ ಗುಡುಗಿದ್ದಾರೆ. ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ, ನಮ್ಮಲ್ಲಿ ಕನ್ನಡದ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಆದರೆ ಕನ್ನಡ ಪರವಾಗಿರುವ ಕೆಲ ಕನ್ನಡಪರ ಸಂಘಟನೆಗಳಲ್ಲಿಯೇ ಗೊಂದಲವಿದೆ ಎಂದರು. ಇದಕ್ಕೂ ಮುನ್ನ ಬುರ್ಜ್ ಖಲೀಫಾದಲ್ಲಿ ಕನ್ನಡದ ಬಾವುಟ ಪ್ರದರ್ಶನ ಕಂಡ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ಗೆ ಕನ್ನಡಪರ ಹೋರಾಟಗಾರರು ಸನ್ಮಾನ ಮಾಡಿದರು.