ಸರಳವಾಗಿ ನಡೆದ ಶ್ರೀ ಮಹಾದೇವ ತಾತರ 33ನೇ ಪುಣ್ಯಸ್ಮರಣೆಯ ಜಾತ್ರೆ
ಬಳ್ಳಾರಿ: ವಿನಾಯಕ ನಗರದ ಅಲ್ಲಿಪುರದ ಶ್ರೀ ಮಹಾದೇವ ತಾತ ಅವರ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬೆಳಗಿನ ಜಾವ 5 ಗಂಟೆಗೆ 50 ಮೀಟರ್ ದೂರ ತೇರು ಎಳೆಯುವ ಮೂಲಕ ಭಕ್ತರು ಚಾಲನೆ ನೀಡಿದರು. ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಮುಖಂಡ ಹೇಮಂತರಾಜ, ಕಳೆದ ಹತ್ತು ದಿನಗಳಿಂದ ಪುರಾಣ ಕಾರ್ಯಕ್ರಮ ನಡೆದಿದೆ. ಇಂದು ಹನ್ನೊಂದನೇ ದಿನವಾಗಿದೆ. ಕೋವಿಡ್ ಇರುವ ಕಾರಣ ಇಂದು ಬೆಳಗ್ಗೆಯೇ 50 ಮೀಟರ್ ದೂರ ಮಡಿ ತೇರು ಮಾತ್ರ ಎಳೆಯಲಾಗಿದೆ. ಕೋವಿಡ್ ಮುಂಜಾಗ್ರತೆಯಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಸಂಜೆ ರಥೋತ್ಸವ ಇಲ್ಲದ ಕಾರಣ ಭಕ್ತರ ಸಂಖ್ಯೆ ಕಡಿಮೆಯಾಗಬಹುದು ಎಂದು ತಿಳಿಸಿದರು.