ಜನತಾ ಕರ್ಫ್ಯೂ: ಜನನಿ ಫೌಂಡೇಶನ್ನಿಂದ ಜನಜಾಗೃತಿ - corona special awareness in davanagere
ಕೊರೊನೊ ಸೋಂಕು ತಡೆಗೆ ಭಾನುವಾರ ಕರೆ ನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನನಿ ಫೌಂಡೇಶನ್ ನಿಂದ ನಗರದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ನಗರದ ಜಯದೇವ ವೃತ್ತದಲ್ಲಿ ಕರ್ಫ್ಯೂ ಬೆಂಬಲಿಸುವಂತೆ ಭಿತ್ತಿ ಪತ್ರ ಹಂಚಿ, ಬರಹಗಳನ್ನು ಪ್ರದರ್ಶಿಸುವ ಮೂಲಕ ವಿಶೇಷವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.