ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯಗೆ 'ಟಗರು' ನೀಡಿ ಗೌರವಿಸಿದ ಅಭಿಮಾನಿಗಳು - Basavakalyana
ಬೀದರ್: ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಸಸ್ತಾಪೂರ್ ಗ್ರಾಮದಲ್ಲಿ ಹೂವಿನ ಮಳೆ ಸುರಿಸಿದ ಅಭಿಮಾನಿಗಳು ಕಾಂಗ್ರೆಸ್ ಧ್ವಜಗಳಿಂದ ಅಲಂಕಾರ ಮಾಡಿದ್ದ ಟಗರನ್ನು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಿದರು.