ಜೆಡಿಎಸ್-ಬಿಜೆಪಿ ಭರವಸೆಗಳನ್ನು ಶಿರಾ ಜನತೆ ನಂಬಲ್ಲ: ಟಿ.ಬಿ.ಜಯಚಂದ್ರ - ಶಿರಾ ಉಪಚುನಾವಣೆ ಲೆಟೆಸ್ಟ್ ನ್ಯೂಸ್
ತುಮಕೂರು: ಮದಲೂರು ಕೆರೆಗೆ ಇನ್ನು 6 ತಿಂಗಳಲ್ಲಿ ನೀರು ಹರಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಹೇಳಿಕೆ ಅಸಾಧ್ಯವಾದದ್ದು. ಇದು ಒಂದು ರೀತಿಯ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಟೀಕಿಸಿದ್ದಾರೆ. ಇಂತಹ ಪೊಳ್ಳು ಭರವಸೆಗಳನ್ನು ಶಿರಾ ಕ್ಷೇತ್ರದ ಜನರು ಒಪ್ಪುವುದಿಲ್ಲ ಎಂದು ಅವರು ಈಟಿವಿ ಭಾರತಕ್ಕೆ ತಿಳಿಸಿದರು.