ಕರ್ನಾಟಕ

karnataka

ETV Bharat / videos

ಬಸ್ ಇಲ್ಲದೆ ಬಸ್​ ಪಾಸ್​ ಇದ್ದು ಎನ್ ಮಾಡೋಣ : ಎಸ್​ಎಫ್​ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ - haveri latest news

By

Published : Sep 22, 2019, 11:02 AM IST

ಹಾವೇರಿ ಜಿಲ್ಲಾ ಕೇಂದ್ರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಕರ್ಯ ಸರಿಯಾಗಿಲ್ಲಾ ಎಂದು ಆರೋಪಿಸಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸುತ್ತಮುತ್ತವಿರುವ ವಿದ್ಯಾರ್ಥಿ ವಸತಿ ನಿಲಯಗಳಿಗೆ ಯಾವುದೇ ಬಸ್ ಸೌಕರ್ಯವಿಲ್ಲ. ನಮಗೆ ಹಣ ನೀಡಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಬಸ್ ಪಾಸ್ ಇದ್ದರೂ ಬಸ್ ಚಾಲಕರು ಬಸ್ ನಿಲ್ಲಿಸುವುದಿಲ್ಲ. ಹೀಗಾದರೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿರುವುದಾದರು ಏತಕ್ಕೆ ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಈ ಕುರಿತಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರು ಸಹ ಸ್ಪಂದಿಸುತ್ತಿಲ್ಲಾ ಮುಂದಿನ ದಿನಗಳಲ್ಲಿಯಾದರು ಸಾರಿಗೆ ಇಲಾಖೆ ವಿದ್ಯಾರ್ಥಿಸ್ನೇಹಿಯಾಗಿರಬೇಕು. ಇಲ್ಲದಿದ್ದರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ABOUT THE AUTHOR

...view details