ಸೇವಾನಿರತರು, ನಿರ್ಗತಿಕರಿಗೆ ಮೂರು ಹೊತ್ತಿನ ಊಟ... ಹಸಿದವರ ಪಾಲಿಗೆ ಅನ್ನದಾತರಾದ ಸೇಡಂ ಜನತೆ
ಸೇಡಂನಲ್ಲಿ ನಿರ್ಗತಿಕರು, ಭಿಕ್ಷುಕರಿಗೆ ಮೂರು ಹೊತ್ತಿನ ಊಟ, ಬಡವರಿಗೆ ದವಸ ಧಾನ್ಯ ಹಾಗೂ ಕರೊನಾ ವಿರುದ್ಧ ನಿರಂತರ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗೆ ಉಪಹಾರ, ಫಲಾಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ಕೊರೊನಾ ಭೀತಿಗೆ ಇಡೀ ದೇಶವೇ ಸ್ತಬ್ಧವಾಗಿದೆ. ಜೊತೆಗೆ ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಅಂತಹವರಿಗೆ ಕೆಲ ಸ್ಥಳೀಯರು ಸಹಾಯ ಹಸ್ತ ಚಾಚಿದ್ದಾರೆ. ಪಟ್ಟಣದ ಪ್ರಶಾಂತ ಕೇರಿ, ಅಂಬರೀಶ ಊಡಗಿ, ಭರತ ಬಜಾಜ, ಹನುಮಂತ, ಸಂತೋಷ ತಳವಾರ, ಸಂತೋಷ ಬನ್ನಿ, ರಾಜು ಹಡಪದ, ದೇವಿಂದ್ರ ಸುಣಗಾರ ಸೇರಿದಂತೆ ಅನೇಕರು ಸಹಾಯ ಹಸ್ತ ಚಾಚಿದ್ದಾರೆ. ಅಷ್ಟೇ ಅಲ್ಲದೆ ದೂರದ ರಾಜ್ಯಗಳಿಂದ ತಮ್ಮ ಊರಿನತ್ತ ಕಾಲ್ನಡಿಗೆಯಲ್ಲೇ ತೆರಳುವವರಿಗೂ ಸಹ ಊಟ ಕಲ್ಪಿಸಿ, ಅವರಿಗೆ ಊರು ತಲುಪಲು ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.