ಗಾಂಧೀಜಿಯ ಉಪ್ಪಿನ ಸತ್ಯಾಗ್ರಹದ ಆ ಉಪ್ಪು ಇವತ್ತಿಗೂ ಈ ಮ್ಯೂಸಿಯಂನಲ್ಲಿದೆ! - Gandhiji
1930ರಲ್ಲಿ ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಆರಂಭಿಸುವ ಮೂಲಕ ಗಾಂಧೀಜಿಯವರು ಬ್ರಿಟಿಷ್ ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದರು. ಈ ಸಂದರ್ಭದಲ್ಲಿ ಗುಜರಾತ್ನ ದಂಡಿಗೆ ಕಾಲ್ನಡಿಗೆ ಮೂಲಕ ತೆರಳಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪು ತಯಾರಿಸಲಾಗಿತ್ತು. ಇಲ್ಲಿ ತಯಾರಾದ ಉಪ್ಪನ್ನು ದೇಶದ ವಿವಿಧೆಡೆ ಹಂಚಲಾಗಿತ್ತು. ಹೀಗೆ ಹಂಚಲಾದ ಉಪ್ಪು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ (ಈಗಿನ ಪ್ರಯಾಗ್ರಾಜ್)ಗೂ ತಲುಪಿತ್ತು. ಸುಮಾರು 8 ದಶಕಗಳ ಐತಿಹಾಸಿಕ ಸತ್ಯಾಗ್ರಹದ ಅದೇ ಉಪ್ಪು ಅಲಹಾಬಾದ್ನಲ್ಲಿ ಈಗಲೂ ಇದೆ.