ಅಂತಾರಾಷ್ಟ್ರೀಯ ಮಟ್ಟದ ಗುಲಾಬಿ ಬೆಳೆದವರ ಪರಿಸ್ಥಿತಿ ಏನಾಗಿದೆ ಗೊತ್ತೇ? - ನಷ್ಟದಲ್ಲಿ ಗುಲಾಬಿ ಬೆಳೆಗಾರರು
ಗುಲಾಬಿ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ಈ ಹೂವಿನ ಅಂದವನ್ನು ಪದಗಳಲ್ಲಿ ವರ್ಣಿಸಲಾಗದು. ಆದ್ರೆ, ಈ ಬಾರಿ ರೋಸ್ ಬೆಳೆಗಾರರ ಸ್ಥಿತಿ ದಯನೀಯವಾಗಿದೆ. ಇದಕ್ಕೆ ಕಾರಣ ಕೊರೊನಾ ಹೆಮ್ಮಾರಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ದಾವಣಗೆರೆ ತಾಲೂಕಿನ ತುರ್ಚಘಟ್ಟದ ಪಾಲಿ ಹೌಸ್‌ನಲ್ಲಿ ದಿನಕ್ಕೆ 20 ಸಾವಿರ ಹೂ ಕೀಳಲಾಗುತಿತ್ತು. ಆದರೆ ಡಿಸೆಂಬರ್ ತಿಂಗಳಿನಲ್ಲೇ ಕೊರೊನಾ ಕಾಣಿಸಿಕೊಂಡ ಕಾರಣ ಹೊರದೇಶಗಳಲ್ಲಿ ರೋಸ್ ಕೇಳುವವರೇ ಇಲ್ಲ. ಇದರಿಂದಾಗಿ ರೋಸ್ ಬೆಳೆಗಾರರು ಸುಮಾರು 60 ರಿಂದ 70 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆ. ತಮ್ಮ ಏಳೂವರೆ ಎಕರೆ ಭೂಮಿಯಲ್ಲಿ ಬೆಳೆದ ಗುಲಾಬಿಯನ್ನು ಬೆಳೆಗಾರರು ಟ್ರ್ಯಾಕ್ಟರ್ ಮೂಲಕ ನೆಲ ಸಮಗೊಳಿಸಿದ್ದಾರೆ.