ಮಳೆ ಹೊಡೆತಕ್ಕೆ ಕುಸಿದ ಸೇತುವೆ.. ವಿದ್ಯಾರ್ಥಿಗಳದು ನಿತ್ಯ ಸರ್ಕಸ್..
ಮೈಸೂರು ಜಿಲ್ಲೆಯಲ್ಲಿ ಮಳೆ ಬಿಟ್ಟರೂ ಮಳೆಯಿಂದಾದ ಅನಾಹುತಗಳು, ಜನರನ್ನು ನಿತ್ಯವೂ ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿವೆ. ಶಾಲಾ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಪರದಾಡಿದರೆ, ಕುಸಿದು ಬಿದ್ದಿರುವ ಮನೆಗಳಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಯನ್ನು ಜಿಲ್ಲೆಯ ಅಂಕನಾಥಪುರದ ಕೂಲಿ ಕಾರ್ಮಿಕರು ಕೇಳುತ್ತಿದ್ದಾರೆ.