ಕರ್ನಾಟಕ

karnataka

ETV Bharat / videos

ಪ್ಲಾಸ್ಟಿಕ್​ ಮುಂದೆ ಮುಗ್ಗರಿಸಿದ ಬಿದಿರು... ಬೀದಿ ಪಾಲಾಗುತ್ತಿದೆ ಕಾರ್ಮಿಕರ ಬದುಕು

By

Published : Sep 4, 2019, 12:27 PM IST

ಹೆಚ್ಚುತ್ತಿರುವ ಪ್ಲಾಸ್ಟಿಕ್​ ವಸ್ತುಗಳ ಬಳಕೆಯಿಂದಾಗಿ ತಲೆಮಾರುಗಳಿಂದ ಬಂದಿರುವಂತಹ ಕುಲ ಕಸುಬುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಈ ಪೈಕಿ ಬಿದಿರಿನಿಂದ ತಯಾರಿಸಲಾಗುವ ತಟ್ಟೆ, ಬುಟ್ಟಿ, ಮೊರ ಹಾಗೂ ಇತರೆ ಸಾಂಪ್ರದಾಯಿಕ ವಸ್ತುಗಳ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದ್ದು ಕಸುಬುಗಾರರು ಸಂಕಷ್ಟ ಎದುರಿಸುವಂತಾಗಿದೆ. ಆದ್ರೆ ರಾಯಚೂರಿನ ಮ್ಯಾದರ್ ವಾಡಿಯ ಜನ ತಮ್ಮ ಪೂರ್ವಜರ ಕುಲ ಕಸುಬನ್ನು ಮುಂದುವರೆಸಿಕೊಂಡು ಹೋಗುತ್ತಾ ಪ್ಲಾಸ್ಟಿಕ್ ಉತ್ಪನ್ನ ಮಾರಾಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಆದರೂ, ಬದಲಾದ ಜೀವನ ಶೈಲಿಯಲ್ಲಿ ನೇಪತ್ಯಕ್ಕೆ ಸರಿಯುತ್ತಿರುವ ಬಿದಿರಿನ ಜಾಗವನ್ನು ಪ್ಲಾಸ್ಟಿಕ್​ ಆವರಿಸುತ್ತಿದೆ.

ABOUT THE AUTHOR

...view details