ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ನೇಕಾರ ಸಂಘದ ಪ್ರತಿಭಟನೆ..
ಬೆಳಗಾವಿ:ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಸದಸ್ಯರು. ನೆರೆಯಿಂದ ನೊಂದ ನೇಕಾರರ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಿ, ನೇಕಾರಿಕೆ ಉತ್ತೇಜನಕ್ಕಾಗಿ 425 ಕೋಟಿ ನೆರವು ಹಾಗೂ ಇತರೆ ಹಕ್ಕೊತ್ತಾಯ ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದಲ್ಲಿ 66 ಲಕ್ಷ ನೇಕಾರರು ಕಾರ್ಯನಿರ್ವಸುತ್ತಿದ್ದಾರೆ. ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದಿಂದ ನೇಕಾರರ ಬದುಕು ಬೀದಿಗೆ ಬರುತ್ತಿದೆ. ಐದು ವರ್ಷಗಳಿಂದ ಬರಗಾಲವಿತ್ತು. ಇವಾಗ ಪ್ರವಾಹ, ಈ ಎರಡರ ಮಧ್ಯೆ ನೇಕಾರರು ತತ್ತರಿಸಿ ಹೋಗಿದ್ದಾರೆ. ಶೀಘ್ರದಲ್ಲೇ ಸರ್ಕಾರ ನೇಕಾರರಿಗೆ ನೆರವು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.