ದೇಶದ್ರೋಹದ ಘೋಷಣೆ ಕೂಗಿದ ಪ್ರಕರಣ: ಅಮೂಲ್ಯಾ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ - ಅಮೂಲ್ಯಳ ಗಡಿಪಾರಿಗೆ ಆಗ್ರಹ
ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಟೌನ್‌ಹಾಲ್ ಬಳಿ ಹಿಂದೂ ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಅಮೂಲ್ಯಳನ್ನು ಗಡಿಪಾರು ಮಾಡಬೇಕು, ಆಕೆಗೆ ಉಗ್ರಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
Last Updated : Feb 21, 2020, 1:08 PM IST