ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರಿಂದ ಚಾಲಕರಿಗೆ ಅಪಘಾತ ವಲಯದ ಬಗ್ಗೆ ಜಾಗೃತಿ
ಹುಬ್ಬಳ್ಳಿ: ನಗರದ ಆಕ್ಸ್ಫರ್ಡ್ ಕಾಲೇಜು ಅಪಘಾತ ವಲಯ ಸ್ಥಳದ ಬಗ್ಗೆ ಪೂರ್ವ ಸಂಚಾರಿ ಪೊಲೀಸರಾದ ಪಿಎಸ್ಐ ಶರಣ್ ದೇಸಾಯಿ ಹಾಗೂ ಸಿಪಿಐ ಪ್ರಶಾಂತ್ ನಾಯಕ್ ಚಾಲಕರಿಗೆ ಕರಪತ್ರ ನೀಡಿ ರಸ್ತೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ನಗರದ ಆಕ್ಸ್ಫರ್ಡ್ ಕಾಲೇಜು ಬಳಿ ಇರುವ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿತ್ತು. ಇದನ್ನರಿತ ಪೊಲೀಸರು ಇಲ್ಲಿ ಬಂದು ಸಂಚರಿಸುವ ವಾಹನ ಚಾಲಕರಿಗೆ ಕರಪತ್ರದ ಜೊತೆಗೆ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಿದರು.