ನಿಜವಾದ ದೇವರು ವೈದ್ಯರು, ಪೋಲಿಸರು; ಅವರಿಗೆ ನಮಸ್ಕರಿಸಿ ಎಂದು ಭಕ್ತರಿಗೆ ಮನವಿ ಮಾಡಿದ ಅರ್ಚಕ - deadly corona virus news
ಹುಬ್ಬಳ್ಳಿ: ವಿಶ್ವೇಶ್ವರಯ್ಯ ನಗರದಲ್ಲಿರುವ ಸುಬ್ರಹ್ಮಣ್ಯ ಶನೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೆ ನಮಸ್ಕರಿಸಿ ಎಂದು ಅರ್ಚಕರೊಬ್ಬರು ಮನವಿ ಮಾಡಿದ್ದಾರೆ. ದೇವಸ್ಥಾನದ ಬಾಗಿಲನ್ನು ತೆರೆಯದೇ ಭಕ್ತರು ಕೇಳಿದ ಪ್ರಶ್ನೆಗೆ ನಿಜವಾದ ದೇವರು ವೈದ್ಯರು. ತಮ್ಮ ಜೀವನವನ್ನು ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ವೈದ್ಯರಿಗೆ ನಮಸ್ಕರಿಸಿ ಎಂದು ಹೇಳಿದರು.