ಹೆಸರಿಗಷ್ಟೇ ಸಿರಿಬಾಗಿಲು.. ರಸ್ತೆ, ಸೇತುವೆ ಇಲ್ಲದೆ ಜನರಿಗೆ ತಪ್ಪದ ಗೋಳು..
ಮಳೆಗಾಲ ಬಂದ್ರೆ ಸಾಕು ಪುತ್ತೂರು ತಾಲೂಕಿನ ಸಿರಿಬಾಗಿಲು ಗ್ರಾಮ ಇತರೆ ಪ್ರದೇಶಗಳ ಸಂಪರ್ಕವನ್ನೇ ಕಳೆದುಕೊಳ್ಳುತ್ತೆ. ಮೂರು ನದಿಗಳು ಹರಿಯುತ್ತಿರುವ ಈ ಗ್ರಾಮದಲ್ಲಿನ ಸಂಚಾರ ಮಳೆಗಾಲದಲ್ಲಿ ಹರಸಾಹಸ. ಹೆಸರಿಗಿದು ಸಿರಿ ಬಾಗಿಲಾಗಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕಾಡು ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ. ಮಳೆಗಾಲ ಬಂದ್ರೆ ಹೊಳೆಗಳು ತುಂಬಿ, ಸೇತುವೆಯಿಲ್ಲದೇ ಪರದಾಟ ನಡೆಸಬೇಕಾಗುತ್ತದೆ. ಅದ್ರಲ್ಲೂ ವಿದ್ಯಾರ್ಥಿಗಳ ಪಾಡಂತೂ ಹೇಳಲಾಗದು. ಸಮಸ್ಯೆ ಸರಿಪಡಿಸಲು ಸಾಕಷ್ಟು ಬಾರಿ ಸಂಬಂಧಪಟ್ಟವರ ಬಳಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಿಲ್ವಂತಾರೆ ಸ್ಥಳೀಯರು.