ತುಂಬಿ ಹರಿಯುತ್ತಿರುವ ಹಿರಣ್ಯಕೇಶಿ ನದಿ: ಪ್ರವಾಹ ಭೀತಿಯಲ್ಲಿ ಸಂಕೇಶ್ವರ ಜನತೆ - ಬೆಳಗಾವಿ ಪ್ರವಾಹ
ಚಿಕ್ಕೋಡಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿ ಜೊತೆಗೆ ಹಿರಣ್ಯಕೇಶಿ ನದಿಯಲ್ಲೂ ನೀರು ತುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಹಿರಣ್ಯಕೇಶಿ ನದಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ನೀರಿಗೆ ಸಂಕೇಶ್ವರ ಪಟ್ಟಣದ ಗ್ರಾಮ ದೇವತೆ ಲಕ್ಷ್ಮಿ ದೇವಸ್ಥಾನ ಜಲಾವೃತವಾಗಿದೆ. ನದಿಯ ಹಿನ್ನೀರು ಕೆಲವು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದು, ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷವೂ ಈ ಭಾಗದ ಜನರು ಮಹಾಮಳೆಗೆ ನಲುಗಿದ್ದರು.