ಭಯ ಬಿಡಿ ಕೆಆರ್‌ಎಸ್ ಡ್ಯಾಂ ಭದ್ರ.. ರೈತರ ಆತಂಕ ದೂರ ಮಾಡಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.. - ಸರ್.ಎಂ. ವಿಶ್ವೇಶ್ವರಯ್ಯ
ಮಂಡ್ಯ : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ತಂತ್ರಜ್ಞಾನದ ಫಲವಾಗಿ ಕೆ ಆರ್ ಎಸ್ ಜಲಾಶಯ ನಿರ್ಮಾಣವಾಗಿದೆ. ಆದ್ರೆ, ಕೃಷಿಕರ ಜೀವನಾಡಿಯಾಗಿರೋ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಅನ್ನದಾತರು ಸೇರಿ ರಾಜ್ಯದ ಜನರಲ್ಲಿ ಶಾಕ್ ನಿಡಿತ್ತು. ಆದ್ರೀಗ ಅಂತಹ ಯಾವುದೇ ಸಮಸ್ಯೆಗಳಿಲ್ಲ, ಯಾರೂ ಭಯಪಡುವ ಅಗತ್ಯವಿಲ್ಲ ಅಂತಾ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ..