ಗೃಹ ಸಚಿವರ ತವರಲ್ಲಿ ಕೊರೊನಾ ವಾರಿಯರ್ಸ್ಗಳಿಗಿಲ್ಲ ರಕ್ಷಣಾ ಕವಚಗಳು - ಕೊರೊನಾ ವೈರಸ್
ಕೊರೊನಾ ವೈರಸ್ ಹಾವೇರಿ ಜಿಲ್ಲೆಗೆ ಬರದಂತೆ ತಡೆಯುವಲ್ಲಿ ಜಿಲ್ಲೆಯ ಪೊಲೀಸರದ್ದು ಪ್ರಮುಖ ಪಾತ್ರವಿದೆ. ಹಗಲುರಾತ್ರಿ ಎನ್ನದೇ ದಿನದ 24 ಗಂಟೆ ಚೆಕ್ಕಿಂಗ್ ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ವಿಪರ್ಯಾಸ ಅಂದರೆ ಈ ವಾರಿಯರ್ಸಗಳಿಗೆ ರೋಗತಡೆಗಟ್ಟಲು ಸರಿಯಾದ ಸೌಲಭ್ಯಗಳನ್ನು ನೀಡಿಲ್ಲವಂತೆ ಅಲ್ಲದೇ ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೃಹ ಸಚಿವರ ತವರಲ್ಲಿ ಈ ರೀತಿಯಾದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...