ಸರಳವಾಗಿ ನಡೆದ ನಂಜನಗೂಡು ಪಂಚ ಮಹಾರಥೋತ್ಸವ - Mysore Corona news
ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನಂಜನಗೂಡಿನ ಐತಿಹಾಸಿಕ ಪಂಚ ಮಹಾರಥೋತ್ಸವ ಅತ್ಯಂತ ಸರಳವಾಗಿ ನಡೆಯಿತು. ನಂಜನಗೂಡಿನಲ್ಲಿ ಬೆಳಗ್ಗೆ 6ರಿಂದ 7ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಶಿವ, ಪಾರ್ವತಿ, ಚಂಡಿಕೇಶ್ವರ, ಗಣಪತಿ, ಸುಬ್ರಹ್ಮಣ್ಯ ರಥಗಳನ್ನು ಎಳೆಯುವ ಮೂಲಕ ನಂಜುಂಡೇಶ್ವರನಿಗೆ ಜೈಕಾರ ಮೊಳಗಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಪಂಚ ಮಹಾರಥೋತ್ಸವದ ದೊಡ್ಡ ರಥವನ್ನು ಈ ಬಾರಿ ಎಳೆಯಲಿಲ್ಲ. 5 ಸಣ್ಣ ರಥಗಳನ್ನು ಮಾತ್ರ ಎಳೆಯಲಾಯಿತು. ರಥೋತ್ಸವದಲ್ಲಿ ಜನಸಂಖ್ಯೆಯನ್ನು ನಿಗದಿಗೊಳಿಸಿದ್ದರಿಂದ ತಾಲೂಕಿನ ಕೆಲವು ಮಂದಿ ಮಾತ್ರ ಭಾಗವಹಿಸಿದ್ದರು.