ಜನತಾ ಕರ್ಫ್ಯೂಗೆ ದೇಶವ್ಯಾಪಿ ಬೆಂಬಲ.. ನಂಜನಗೂಡು ಕಾರ್ಖಾನೆ ಒಪನ್..
ಜನತಾ ಕರ್ಫ್ಯೂಗೆ ದೇಶವೇ ಬೆಂಬಲಿಸ್ತಿದೆ. ಆದರೆ, ನಂಜನಗೂಡು ತಾಲೂಕಿನ ಕಾರ್ಖಾನೆಯೊಂದು ನೌಕರರಿಗೆ ರಜೆ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ತಾಯೂರು ಗ್ರಾಮದ ಬಳಿಯ ಗ್ಲೂಕೋ ಬಯೋಟೆಕ್ ಕಾರ್ಖಾನೆ ನಿತ್ಯದಂತೆ ಕೆಲಸ ನಿರ್ವಹಿಸುತ್ತಿದೆಯಂತೆ. ಸುಮಾರು 300ಕ್ಕೂ ಹೆಚ್ಚು ಕಾರ್ಮಿಕರು ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನತಾ ಕರ್ಫ್ಯೂ ಮೂಲಕ ಕೊರೊನಾ ಮಹಾಮಾರಿ ತಡೆಗೆ ಹರಸಾಹಸ ನಡೆಸ್ತಿರುವಾಗ ಕಾರ್ಖಾನೆಯ ಈ ನಡೆ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.