ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್: ಮೈಲಾರಲಿಂಗೇಶ್ವರ ಗೊರವಪ್ಪನ ಕಾರಣಿಕ!
ಹಾವೇರಿ/ಬಳ್ಳಾರಿ: 'ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್' ಇಂದು ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರ ನುಡಿದ ಕಾರಣಿಕ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆದ ಜಾತ್ರೆಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದ್ದು, ಕಾರ್ಣಿಕವನ್ನ ವರ್ಷದ ಭವಿಷ್ಯವಾಣಿ ಅಂತಲೆ ಭಕ್ತರು ನಂಬುತ್ತಾರೆ. ಸಂಪ್ರದಾಯದಂತೆ ಗೊರವಲ್ಲ ಬಿಲ್ಲನ್ನು ಏರಿ ಕಾರಣಿಕ ನುಡಿದಿದ್ದಾರೆ. ಪ್ರಸಕ್ತ ಸಾಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಏರುಪೇರು ಆಗುವ ಮುನ್ಸೂಚನೆಯನ್ನ ಕಾರಣಿಕದಲ್ಲಿ ನುಡಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.