ಯಾದಗಿರಿಯಲ್ಲಿ ಲಾಕ್ಡೌನ್ ಸಡಿಲಿಕೆ...ಬಸ್ ಸಂಚಾರ ಆರಂಭ
ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಯಾದಗಿರಿಯಲ್ಲಿ ಕೂಡ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವ ಮೂಲಕ ಜಿಲ್ಲಾ ಸಾರಿಗೆ ಸಂಸ್ಥೆ ಜಿಲ್ಲಾ ಕೇಂದ್ರದಿಂದ ಸುರಪುರ, ಶಹಪುರ, ಸೇರಿದಂತೆ ಗುರಮಿಠಕಲ್ ತಾಲೂಕು ಕೇಂದ್ರಗಳಿಗೆ ಪ್ರಯಾಣಿಕರು ಸಂಚರಿಸಲು ಬಸ್ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ ಧರಿಸಿದರೆ ಮಾತ್ರ ಬಸ್ ನಲ್ಲಿ ಪ್ರವೇಶ. ಹಾಗೆ ಪ್ರಯಾಣಿಕರಿಗೆ ಸ್ಯಾನಿಟೈಸರ್ ನಿಂದ ಹ್ಯಾಂಡ್ ವಾಶ್ ಕೂಡ ಕಡ್ಡಾಯಗೊಳಿಸಿದ್ದು, ಒಂದು ಬಸ್ನಲ್ಲಿ ಕೇವಲ 30 ಪ್ರಯಾಣಿಕರಷ್ಟೇ ಸಂಚರಿಸುವ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಅಂತರಕ್ಕೂ ಮಹತ್ವ ನೀಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.