ಬಿಸಿಲ ನಾಡಲ್ಲಿ ಭೋರ್ಗರೆಯುತ್ತಿದ್ದಾಳೆ ಕಪಿಲೆ... ನೀರಿನ ಝುಳು ಝುಳು ನಿನಾದಕ್ಕೆ ಪ್ರವಾಸಿಗರ ದಿಲ್ ಖುಷ್ - koppal news
🎬 Watch Now: Feature Video
ಕೊಪ್ಪಳ: ಸುತ್ತಲೂ ಹಸಿರು ಹೊದ್ದು ಮಲಗಿರುವ ಬೆಟ್ಟ ಗುಡ್ಡದ ನಡುವೆ ಝುಳು ಝುಳು ನಾದ ಹೊಮ್ಮಿಸುತ್ತಾ ಭೋರ್ಗರೆಯುತ್ತಿರುವ ಜಲಧಾರೆ. ಧುಮ್ಮಿಕ್ಕುತ್ತಿರುವ ನೀರಿಗೆ ಒಮ್ಮೆ ಮೈಯೊಡ್ಡಿ ನಿಂತರೆ ದಣಿವು ಮಾಯ. ಇಂತಹ ಆಹ್ಲಾದ, ಅನುಭೂತಿ ನೀಡುವ ನಿಸರ್ಗವಿರೋದು ಉರಿ ಬಿಸಿಲಿನ ನಾಡು ಕೊಪ್ಪಳ ಜಿಲ್ಲೆಯಲ್ಲಿ ಅಂದ್ರೆ ನೀವು ನಂಬಲಿಕ್ಕಿಲ್ಲ.