ಜಗನ್ಮಾತೆಯ ಜಾತ್ರೆಯಲ್ಲಿ ಗಮನ ಸೆಳೆದ ಜೋಡೆತ್ತು! - kannada news
ಮಂಡ್ಯ: ರಾಜ್ಯ ರಾಜಕೀಯ ವಲಯದಲ್ಲಿ ಜೋಡೆತ್ತು ಎಂಬ ಪದ ಸಖತ್ ಫೇಮಸ್ ಆಗಿದ್ದಂತು ಸತ್ಯ. ಇನ್ನು ಅದೇ ಥರ ಇಲ್ಲೊಂದು ಹಳ್ಳಿಯ ಜಾತ್ರೆಯಲ್ಲಿ ಯುವಕರ ಗುಂಪೂಂದು ಜೋಡೆತ್ತು ಎಂಬ ಬರಹವುಳ್ಳ ಟೀ ಶರ್ಟ್ ಧರಿಸಿದ್ದು ವಿಶೇಷವಾಗಿತ್ತು. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ದೊಡ್ಡಹಾರನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಶ್ರೀ ಜಗನ್ಮಾತೆ ಮಾಯಮ್ಮ ದೇವಿ ಜಾತ್ರೆಯಲ್ಲಿ ಈ ವಿಶೇಷ ಕಂಡು ಬಂದಿದ್ದು, ಗ್ರಾಮದ ಯುವಕರು ಜೋಡೆತ್ತು ಎಂಬ ನಾಮವುಳ್ಳ ಟಿ ಶರ್ಟ್ಸ್ ಧರಿಸಿ ಅದ್ದೂರಿಯಾಗಿ ಗ್ರಾಮದ ದೇವರ ಉತ್ಸವ ನಡೆಸಿದರು. ಜಾತ್ರೆಯಲ್ಲಿ ಸೋಮನ ಕುಣಿತ ಮತ್ತು ದೇವರ ಕುಣಿತ ಆಕರ್ಷಣೆಯಾಗಿತ್ತು.