ಅರಮನೆ ನಗರಿಯಲ್ಲಿ ಸಂಚಾರಿ ಅರಿವು ಮಳಿಗೆ ಉದ್ಘಾಟನೆ - ಅಪ್ರಾಪ್ತರಿಗೆ ಬೈಕ್ ಕೊಟ್ಟರೇ ಕಾನೂನು ಶಿಕ್ಷೆ
ಕರ್ನಾಟಕ ವಸ್ತು ಪ್ರದರ್ಶನದ ಆವರಣದಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ ಸ್ಥಾಪಿತವಾಗಿರುವ ಸಂಚಾರಿ ಅರಿವು ಮಳಿಗೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಉದ್ಘಾಟಿಸಿದರು. ಸಂಚಾರಿ ಅರಿವು ಮಳಿಗೆಯಲ್ಲಿ ಬೈಕ್ ವ್ಹೀಲಿಂಗ್, ಅಪ್ರಾಪ್ತರಿಗೆ ಬೈಕ್ ಕೊಟ್ಟರೆ ಕಾನೂನು ಶಿಕ್ಷೆ, ಡಿಎಲ್, ವಿಮೆ, ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದರೆ ದಂಡದ ಮೊತ್ತ ಹಾಗೂ ಕಾನೂನಿನ ಪರಿಮಿತಿ ಕುರಿತು ಅರಿವು ಮೂಡಿಸಲಾಗಿದೆ. ಪೊಲೀಸರೆಂದರೆ ಸಾರ್ವಜನಿಕರ ರಕ್ಷಕರು, ಸಂಚಾರ ನಿಯಮ ಪಾಲನೆ ಮಾಡಿ, ಜೀವನ ಉಳಿಸಿಕೊಂಡು ಕಾನೂನಿಗೆ ಗೌರವಿಸಿ ಹೀಗೆ ಹಲವಾರು ಮಾಹಿತಿಗಳ ಜೊತೆ ಸಿಗ್ನಲ್ಗಳ ವಿವರಣೆ ನೀಡಲಾಗಿದೆ.