ಕರಾವಳಿಯಲ್ಲಿ ಗಾಳಿ ಸಹಿತ ಮಳೆ ಅಬ್ಬರ: ಸಂಕಷ್ಟದಲ್ಲಿ ಮೀನುಗಾರರು
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ. ಕಡಲಿನಲ್ಲಿ ಅಲೆಗಳ ಆರ್ಭಟಕ್ಕೆ ಸಮುದ್ರ ತೀರಗಳು ಕೊಚ್ಚಿ ಹೋಗುತ್ತಿದ್ದು, ಮರ ಗಿಡಗಳು ಬುಡಮೇಲಾಗಿವೆ. ಮಾತ್ರವಲ್ಲದೇ ಮೀನುಗಾರಿಕೆಯ ಆರಂಭದ ಒಂದಿಷ್ಟು ದಿನಗಳ ಕಾಲ ನಾಡದೋಣಿಗಳ ಮೂಲಕ ಮೀನುಗಾರಿಕೆ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದ ಸಾಂಪ್ರದಾಯಿಕ ಮೀನುಗಾರರಿಗೆ ಇದೀಗ ಗಾಳಿ ಮಳೆ ಅಡ್ಡಿಯಾಗಿದೆ. ಹೀಗಾಗಿ ಅವರ ಬದುಕೇ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ.
Last Updated : Aug 5, 2020, 11:01 AM IST