ರಾಯಚೂರಲ್ಲಿ ಧಾರಾಕಾರ ಮಳೆ... ಉಪ್ಪಾರವಾಡಿಯಲ್ಲಿ ಮನೆ ಮೇಲ್ಛಾವಣಿ ಕುಸಿತ - raichur news
ರಾಯಚೂರು: ಜಿಲ್ಲೆಯಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ನಗರದ ಬೇಸ್ತವಾರ ಪೇಟೆಯ ಉಪ್ಪಾರವಾಡಿಯಲ್ಲಿ ಮನೆಯ ಮೇಲ್ಛಾವಣಿ ಕುಸಿದ ಘಟನೆ ನಡೆದಿದೆ. ಖಾಜಾಹುಸೇನ್ ಎಂಬುವವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಮಾಲೀಕ ಖಾಸಗಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತಿದ್ದು, ಮನೆಯ ಮೇಲ್ಛಾವಣಿ ಕುಸಿತದಿಂದ ಚಿಂತೆಗೀಡಾಗಿದ್ದಾರೆ. ಮನೆ ದುರಸ್ತಿಗೊಳಿಸಲು. 50-70 ಸಾವಿರ ರೂಪಾಯಿ ಖರ್ಚಾಗಲಿದ್ದು, ಬಡವರಾದ ನಾವು ಹೇಗೆ ಹೊಂದಿಸಬೇಕು ಎನ್ನುವುದು ತಿಳಿಯುತ್ತಿಲ್ಲ. ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಸಹಕಾರ ನೀಡಬೇಕೆಂದು ಗೃಹಣಿ ಸಾಜಿದಾ ಬೇಗಂ ಒತ್ತಾಯಿಸಿದ್ದಾರೆ.