ಸಿರವಾರ ಪಟ್ಟಣದಲ್ಲಿ ಸಂಭ್ರಮದ ಹಾಲುಗಂಬ ಉತ್ಸವ
ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದ ಶ್ರೀಬಯಲು ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ವೈಭವದ ಹಾಲುಗಂಬ ಉತ್ಸವ ಜರುಗಿತು. ಈ ಉತ್ಸವದಲ್ಲಿ ಹಾಲುಗಂಬಕ್ಕೆ ಲೋಳೆರಸ, ಜಾಜ ಲೇಪನ ಮಾಡಲಾಗಿರುತ್ತದೆ. ನಾಯಕ ಸಮುದಾಯಕ್ಕೆ ಸೇರಿದವರು ಮಾತ್ರ ಹಾಲುಗಂಬ ಏರುವ ಪದ್ಧತಿಯಿದ್ದು, ಕಂಬವನ್ನು ಹತ್ತುವ ವೇಳೆ ಕೆಳಗಡೆಯಿಂದ ಗಂಗಾಮತ ಸಮಾಜದವರು ನೀರು ಎರಚುತ್ತಾರೆ. ಇದರಿಂದ ಕಂಬ ಏರುವವರು ಕೆಳಗೆ ಬೀಳುವ ಮತ್ತೆ ಏರುವ ದೃಶ್ಯಗಳು ಕಂಡು ಬರುತ್ತವೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ 11 ತೊಲೆ ಬೆಳ್ಳಿ ಖಡ್ಗ, ದ್ವಿತೀಯ ಪಡೆದವರಿಗೆ 5 ತೊಲೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಿರವಾರ ಸೇರಿದಂತೆ ಪಟ್ಟಣದ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ಜನರು ಹರಿದು ಬರುತ್ತಾರೆ.