ಮಳೆಗಾಗಿ ಏನೆಲ್ಲಾ! ಕಪ್ಪೆಗಳ ಮದ್ವೆಗಾದ್ರೂ ಕೃಪೆದೋರುತ್ತಾನಾ ವರುಣ?
ಉಡುಪಿ : ಮಳೆ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯ ವಿವಿಧೆಡೆ ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ ನಡೆಯುತ್ತಿದೆ. ಇವತ್ತು ನಗರದಲ್ಲಿ ನಡೆದ ಕಪ್ಪೆಗಳ ಮದುವೆ ಗಮನ ಸೆಳೆಯಿತು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಮಂಡೂಕಗಳ ಮದುವೆಯನ್ನು ಆಯೋಜನೆ ಮಾಡಿತ್ತು. ನೂರಾರು ಜನರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.