ಹೆಚ್.ಎನ್ ವ್ಯಾಲಿ ಸಂಸ್ಕರಣ ನೀರಿನಿಂದ ರೈತರಲ್ಲಿ ಮೂಡಿದ ಮಂದಹಾಸ
ಬರಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳಲ್ಲಿ ಕೆ.ಸಿ ವ್ಯಾಲಿ ಮೂಲಕ ಕೋಲಾರಕ್ಕೆ ನೀರು ಬಿಟ್ಟರೆ, ಹೆಚ್.ಎನ್ ವ್ಯಾಲಿ ಮೂಲಕ ದೇವನಹಳ್ಳಿ, ಚಿಕ್ಕಬಳ್ಳಾಪುರದ ಭಾಗದ ಕೆರೆಗಳಿಗೆ ನೀರನ್ನು ಒದಗಿಸುವ ಯೋಜನೆ ಇದಾಗಿದೆ. ಹೆಚ್.ಎನ್ ವ್ಯಾಲಿ ಭಾಗದ ಕಾಮಗಾರಿ ಬಹುತೇಕ ಮುಗಿದಿದ್ದು, ಈಗ ಮೊದಲ ಹಂತವಾಗಿ ಬಾಗಲೂರು ಕೆರೆಗೆ ನೀರು ಹರಿಸಲಾಗಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.