ಸಿದ್ದಗಂಗಾ ಮಠದ ಆವರಣದೊಳಗೆ ಚಿರತೆ ಪ್ರತ್ಯಕ್ಷ... ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ! - ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ
ತುಮಕೂರು: ಸಿದ್ದಗಂಗಾ ಮಠದ ಸುತ್ತಲಿನ ಭಾಗದಲ್ಲಿ ಕಂಡುಬಂದಿರುವ ಚಿರತೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ಅರಂಭಿಸಿದೆ. ಮಠದ ಸಮೀಪ ಚಿರತೆಗಳು ಪ್ರತ್ಯಕ್ಷವಾಗುವ ಬಗ್ಗೆ ಹಲವು ದಿನಗಳಿಂದ ಮಾತುಗಳು ಕೇಳಿ ಬರುತ್ತಿತ್ತು. ಮಠದ ಆವರಣದೊಳಗೆ ಪ್ರವೇಶಿಸಿದಂತಹ ಉದಾಹರಣೆಗಳು ಇರಲಿಲ್ಲ. ಆದರೆ ನಿನ್ನೆ ರಾತ್ರಿ ಚಿರತೆ ಆವರಣದೊಳಗೆ ಬಂದಿದ್ದು, ಚಿರತೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಈ ಕುರಿತಂತೆ ಅರಣ್ಯಾಧಿಕಾರಿ ನಟರಾಜ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.