'ಆಸರೆ ಮನೆಗಳಿಗೆ ಮೂಲಸೌಕರ್ಯ ನೀಡಿ' ಸಂತ್ರಸ್ತರ ಅರಣ್ಯರೋಧನ ಕೇಳೋರಿಲ್ಲವೇ? - Flood residents protest
ಅವರೆಲ್ಲ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರು. 2007 ಹಾಗೂ 2009ರಲ್ಲಿ ಬಂದಿದ್ದ ಪ್ರವಾಹ ಅವರ ಬದುಕನ್ನೇ ಆಹುತಿ ಪಡೆದಿತ್ತು. ಕಳೆದ ಎರಡು ತಿಂಗಳ ಹಿಂದೆ ಬಂದ ಪ್ರವಾಹವಂತೂ ಇಲ್ಲಿನ ನಿವಾಸಿಗಳ ಜೀವನವನ್ನು ಮತ್ತಷ್ಟು ದುಸ್ತರಗೊಳಿಸಿದೆ. ಆದ್ರೆ ಇವರ ಬದುಕು ರೂಪಿಸಲು ಸಹಕರಿಸಬೇಕಾದ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಸಂತ್ರಸ್ತರ ಗಾಯಕ್ಕೆ ಮತ್ತೊಮ್ಮೆ ಬರೆ ಎಳೆಯುತ್ತಿದೆ.