ಮಂಡ್ಯದಲ್ಲಿ ಅಪಾಯಕಾರಿ ವಿದ್ಯುತ್ ಲೈನ್ ಬಳಸಿ ಮೀನು ಶಿಕಾರಿ... ರೈತರಲ್ಲಿ ಹೆಚ್ಚಿದ ಆತಂಕ
ಮಂಡ್ಯ: ಮೀನು ಶಿಕಾರಿಗೆ ಅಪಾಯಕಾರಿ ವಿದ್ಯುತ್ ಲೈನ್ ಬಳಸಿ ಬೇಟೆಯಾಡುತ್ತಿರುವ ಘಟನೆ ಶ್ರೀರಂಗಪಟ್ಟ ತಾಲೂಕಿನ ಮಂಡ್ಯ ಕೊಪ್ಪಲು ಗ್ರಾಮದ ಬಳಿಯ ಕಾವೇರಿ ನದಿ ತೀರದಲ್ಲಿ ಪತ್ತೆಯಾಗಿದೆ. ಕಾವೇರಿ ನದಿಯ ಸಮೀಪ ರೈತರ ಜಮೀನಿಗೆ ಹಾದು ಹೋಗಿರುವ ವಿದ್ಯುತ್ ಮಾರ್ಗಕ್ಕೆ ವೈರ್ ಎಳೆದು, ಅದನ್ನು ನದಿಗೆ ಇಳಿಸಿ ಅಪಾಯಕಾರಿಯಾಗಿ ಮೀನುಗಳನ್ನು ಬೇಟೆಯಾಡಲಾಗುತ್ತಿದೆ. ಹಲವು ದಿನಗಳಿಂದ ಈ ರೀತಿಯ ಬೇಟೆ ನಡೆಯುತ್ತಿದ್ದು, ಸ್ಥಳೀಯ ರೈತರು ಬೆಚ್ಚಿಬಿದ್ದಿದ್ದಾರೆ. ಏನಾದರು ಗೊತ್ತಿಲ್ಲದೆ ನದಿಗಿಳಿದರೆ ಸಾವು ಗ್ಯಾರಂಟಿ ಎಂಬ ಆತಂಕದಲ್ಲಿದ್ದಾರೆ ರೈತರು.