ಕರ್ನಾಟಕ

karnataka

ETV Bharat / videos

ಮೊದಲು ನಮ್ಮ ಆರೋಗ್ಯ, ಬಳಿಕ ಜನರ ಬಗ್ಗೆ ಗಮನ ಕೊಡಿ: ಡಿವೈಎಸ್ಪಿ ಸೂಚನೆ

By

Published : Mar 21, 2020, 11:49 AM IST

ಗಂಗಾವತಿ: ಕರ್ತವ್ಯನಿರತರು‌ ಮೊದಲು ತಮ್ಮ ಆರೋಗ್ಯದ‌ ಬಗ್ಗೆ ಗಮನ ಕೊಡಬೇಕು. ಬಳಿಕವಷ್ಟೇ ಜನರ ಸುರಕ್ಷತೆ ಬಗ್ಗೆ ಆದ್ಯತೆ ಕೊಡಿ ಎಂದು ಡಿವೈಎಸ್ಪಿ ಡಾ. ಬಿ. ಪಿ. ಚಂದ್ರಶೇಖರ ಹೇಳಿದರು. ಕೊರೊನಾ ಸೋಂಕು ಜಿಲ್ಲೆಯಲ್ಲಿ ಕಳವಳ‌ ಮೂಡಿಸುತ್ತಿರುವ ಹಿನ್ನೆಲೆ ಅಗತ್ಯ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸುತ್ತಿದ್ದು, ಈ ಬಗ್ಗೆ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಿವೈಎಸ್ಪಿ ಡಾ. ಬಿ. ಪಿ. ಚಂದ್ರಶೇಖರ ಮಾತನಾಡಿದರು. ಕರ್ತವ್ಯ ನಿರತ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ, ಸೋಂಕು ಪೀಡಿತರ ಬಗ್ಗೆ ಯಾವುದೇ ಸಂದೇಹ ಬಂದಲ್ಲಿ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಿ. ಜನರ ಸೇವೆಗಿಂತಲೂ ಮೊದಲು ನಮ್ಮ ಆದ್ಯತೆ ನಮ್ಮ ಕುಟುಂಬ ರಕ್ಷಣೆಯಾಗಿರಬೇಕು ಎಂದರು.

ABOUT THE AUTHOR

...view details