ಅಗ್ನಿಗಾಹುತಿಯಾದ ರಾಗಿ ಮೆದೆ: ವೈಯಕ್ತಿಕ ದ್ವೇಷದಿಂದ ದುಷ್ಕರ್ಮಿಗಳು ಬೆಂಕಿಯಿಟ್ಟರುವ ಶಂಕೆ - fire on finger millet crop at ramanagara
ರಾಮನಗರ: ರಾಗಿ ಮೆದೆಗೆ ಬೆಂಕಿ ತಗುಲಿ ಮೆದೆ ಸಂಪೂರ್ಣ ಬೆಂಕಿಗಾಹುತಿ ಆಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ. ತಾಲೂಕಿನ ಹಾರೋಹಳ್ಳಿ ಹೋಬಳಿ ಚಿಕ್ಕ ಕಲ್ಲು ಬಾಳು ಗ್ರಾಮದ ಮಾಳಿಗೇಗೌಡ ಎಂಬ ರೈತರಿಗೆ ಸೇರಿದ ರಾಗಿ ಮೆದೆಗೆ ಬೆಂಕಿ ಬಿದ್ದಿದೆ. ಸಾವಿರಾರು ರೂ. ಬೆಲೆ ಬಾಳುವ ಹುಲ್ಲು ಸಂಪೂರ್ಣ ಭಸ್ಮವಾಗಿದ್ದು, ವೈಯಕ್ತಿಕ ದ್ವೇಷದಿಂದ ಅಕ್ಕಪಕ್ಕದ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಇನ್ನೂ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೋ ಅಥವಾ ದ್ವೇಷದಿಂದ ಮೆದೆಗೆ ಬೆಂಕಿ ಹಾಕಿದ್ದಾರೋ ಎಂಬುದು ತನಿಖೆ ಬಳಿಕವೇ ತಿಳಿಯಲಿದೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.