ಶುರುವಾಯ್ತು ಕುಡುಕರ ಬೀದಿ ಜಗಳ... ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಹೊಡೆದಾಟ! - ಕಂಠಪೂರ್ತಿ ಕುಡಿದು ಫೈಟ್
ಕೋಲಾರ: ದೇಶಾದ್ಯಂತ ಇಂದಿನಿಂದ ಮದ್ಯದಂಗಡಿ ಓಪನ್ ಆಗಿದ್ದು, ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಲು ಎಣ್ಣೆ ಪ್ರಿಯರು ಮುಂದಾಗಿದ್ದಾರೆ.ಇದರ ಮಧ್ಯೆ ಕಂಠಪೂರ್ತಿ ಕುಡಿದು ಕೆಲವರು ಬೀದಿಯಲ್ಲೇ ಜಗಳ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬರ್ತಿವೆ. ಕೋಲಾರದ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಬಳಿ ಕಂಠಪೂರ್ತಿ ಕುಡಿದ ಕೆಲವರು ನಡುರಸ್ತೆಯಲ್ಲೇ ಜಗಳವಾಡಿದ್ದು, ಕೈ-ಕೈ ಮಿಲಾಯಿಸಿದ್ದಾರೆ. ಜತೆಗೆ ಕಲ್ಲು-ಬಾಟಲ್ನಿಂದ ಹೊಡೆದಾಡಿಕೊಂಡಿದ್ದಾರೆ. ಇದನ್ನ ನೋಡಿರುವ ಸ್ಥಳೀಯರು ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದಾರೆ.