ಉಜಳಂಬ ಗ್ರಾಮದ ವೀಳ್ಯದಲೆ ಬೆಳೆಗಾರರು ಸಂಕಷ್ಟದಲ್ಲಿ...!
ಅದು ಬರದನಾಡು. ಹೇಳಿ ಕೇಳಿ ಅಲ್ಲಿ ಸದಾ ಉರಿ ಬಿಸಿಲು, ಆ ಜಿಲ್ಲೆಯಯಲ್ಲಿ ಪ್ರತಿವರ್ಷವೂ ಬರಗಾಲ ಎದುರಾಗುತ್ತೆ. ಇಂತ ಬರದನಾಡಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಬೆಳೆಯುತ್ತಾರೆ ಬಂಗಾರದಂಥ ಬೆಳೆ. ಆದ್ರೆ ಆದಾಯ ಮಾತ್ರ ಶೂನ್ಯವಾಗ್ತಿದೆ. ಸ್ಥಳೀಯ ಮಾರುಕಟ್ಟೆ ಇಲ್ಲದಿರುವ ನೋವು ಒಂದಾದರೆ, ಈ ವರ್ಷದ ಮಳೆಯ ಅಭಾವದಿಂದ ಬೆಳೆ ಬಾರದೆ ರೈತ ಕೈ ಸುಟ್ಟುಕೊಂಡು ಕಂಗಾಲಾಗಿದ್ದಾನೆ.