ನೆಚ್ಚಿನ ಗುರುಗಳಿಗೆ ಶಿಷ್ಯ ವೃಂದದಿಂದ ವಿಶಿಷ್ಟ ಬೀಳ್ಕೊಡುಗೆ... - ಆನಂದ ಭಾಷ್ಪ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೊಪೆಸರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಡಾ. ಜಾನೇಗೌಡರಿಗೆ ವಿದ್ಯಾರ್ಥಿಗಳು ಅದ್ಧೂರಿ ಬೀಳ್ಕೊಡುಗೆ ನೀಡಿದರು. ಮಂಡ್ಯ ಶೈಲಿಯಲ್ಲಿ ಎತ್ತಿನ ಗಾಡಿಯನ್ನು ಅಲಂಕರಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ದಂಪತಿ ಸಮೇತ ಮೆರವಣಿಗೆ ಮಾಡಿ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಯನ್ನು ಕಂಡ ಜಾನೇಗೌಡ ದಂಪತಿ ಆನಂದ ಭಾಷ್ಪ ಹರಿಸಿದ್ದಾರೆ.