ಕರ್ನಾಟಕ

karnataka

ETV Bharat / videos

ಬಸ್​​ ನಿಲ್ದಾಣದಲ್ಲಿ ಶ್ವಾನಗಳ ದಂಡು: ಆತಂಕದಲ್ಲಿ ಸಾರ್ವಜನಿಕರು - ಬೀದಿ ನಾಯಿಗಳು

By

Published : Sep 19, 2019, 9:43 AM IST

ರಾಯಚೂರು: ಸಾಮಾನ್ಯವಾಗಿ ಬಸ್ ನಿಲ್ದಾಣಗಳಿಗೆ ತಂಡಪೋತಂಡವಾಗಿ ಪ್ರಯಾಣಿಕರು ಬರುವುದನ್ನು ನೋಡಿದ್ದೇವೆ. ಆದ್ರೆ, ರಾಯಚೂರಿನಲ್ಲಿ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಶ್ವಾನಗಳ ದಂಡು ತಂಡೋಪತಂಡವಾಗಿ ನುಗ್ಗುತ್ತಿವೆ. ಸುಮಾರು 15ಕ್ಕೂ ಹೆಚ್ಚು ಬೀದಿ ನಾಯಿಗಳು ನಿಲ್ದಾಣ ಒಳಗೆ ರಾಜಾರೋಷವಾಗಿ ಓಡಾಡುತ್ತಿವೆ. ಇದರಿಂದ ಪ್ರಯಾಣಿಕರು ನಾಯಿಗಳು ಯಾವಾಗ ದಾಳಿ ನಡೆಸುತ್ತವೋ ಎಂಬ ಆತಂಕದಲ್ಲಿದ್ದಾರೆ. ಯಾಕೆಂದ್ರೆ ಹಿಂದೆ ನಾಯಿಗಳು ದಾಳಿ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿ ಗಾಯಗೊಳಿಸಿದ್ದವು. ಇದೀಗ ಮತ್ತೆ ನಾಯಿಗಳ ದಂಡು ಜನದಟ್ಟಣೆ ಇರುವ ಕಡೆ ಓಡಾಡುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details