ಕೊಪ್ಪಳದಲ್ಲಿ ದೀಪಾವಳಿ ಸಡಗರ: ಪೂಜಾ ಸಾಮಾಗ್ರಿಗಳ ಖರೀದಿ ಜೋರು
ಕೊಪ್ಪಳ: ಬೆಳಕಿನ ಹಬ್ಬ ದೀಪಾವಳಿ ಸಡಗರ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಇಂದು ಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆಯಿತು. ಬೆಳಗ್ಗೆಯಿಂದಲೇ ಜನರು ಪೂಜಾ ಸಾಮಾಗ್ರಿಗಳ ಖರೀದಿಗೆ ಮುಂದಾಗಿದ್ದಾರೆ. ಸತತವಾಗಿ ಮಳೆಯಾಗಿರುವುದರಿಂದ ಚೆಂಡು ಹೂ ಸೇರಿದಂತೆ ವಿವಿಧ ಹೂಗಳ ಬೆಲೆ ತುಸು ಏರಿಕೆಯಾಗಿದೆ. ಪ್ರತಿ ಕೆಜಿ ಚೆಂಡು ಹೂ 80 ರೂಪಾಯಿಯವರೆಗೂ ಇದೆ. ಇನ್ನು ಎರಡು ಬಾಳೆ ಕಂದಿಗೆ 20 ರೂ., ಕಬ್ಬಿನ ಜಲ್ಲೆಗೆ 20 ರೂ. ಇದೆ. ಲಕ್ಷ್ಮೀ ಪೂಜೆ, ವಾಹನಗಳ ಪೂಜೆ, ಅಂಗಡಿಗಳ ಪೂಜೆ ನಡೆಯುವುದರಿಂದ ತಳಿರುತೋರಣ, ಹೂಗಳಿಗೆ ಡಿಮ್ಯಾಂಡ್ ಇದೆ. ದರ ತುಸು ಹೆಚ್ಚಾದರೂ ಸಹ ಜನರು ಹಬ್ಬದ ಸಡಗರಕ್ಕಾಗಿ ಖರೀದಿಸುತ್ತಿದ್ದಾರೆ.