ಗೊಂಬೆಗಳ ಮೂಲಕ ಚಂದ್ರಯಾನ-2ಗೆ ಶಬ್ಬಾಸ್ ಗಿರಿ; ವಿಡಿಯೋ
ಮೈಸೂರಿನ ಅನಿತಾ ಅಚ್ಯುತ್ ತಮ್ಮ ಮನೆಯಲ್ಲಿ 18 ವರ್ಷದಿಂದ ಗೊಂಬೆಗಳನ್ನಿ ವಿಶೇಷ ರೀತಿಯಲ್ಲಿ ಕೂರಿಸುತ್ತಿದ್ದಾರೆ. ಈ ಬಾರಿ ರಾವಣನ ಆತ್ಮಲಿಂಗ ಕಥೆ, ಶಕುಂತಲಾ ದುಷ್ಯಂತನ ಕಥೆ, ಇಂದಿನ ಮಹಾರಾಜ ಯದುವೀರ್ ಅವರು ಸಿಂಹಾಸನ ಮೇಲೆ ಕೂತಿರುವುದು, ಜಂಬೂಸವಾರಿ, ಪುರಿ ಜಗನ್ನಾಥ ಯಾತ್ರೆ, ವೈಕುಂಠ ನಾರಾಯಣ, ರಾಮ, ಕೃಷ್ಣ, ಅಷ್ಟದೇವತೆಗಳು, ಶಿವನ ಕತೆಗಳು ಗೋವರ್ಧನ ಗಿರಿ ಬೆಟ್ಟವನ್ನು ಮಾಡಿ ಅದರ ಮೇಲೆ ದೇವತೆಗಳನ್ನು ಕೂರಿಸಲಾಗಿದೆ. ವಿಶೇಷವಾಗಿ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಉಡ್ಡಯನದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಸಾಧನೆಗೆ ಶಬ್ಬಾಸ್‌ಗಿರಿಯನ್ನು ಗೊಂಬೆಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.