ಮಾರಲೆಂದೇ ಹೂಗಳ ತಂದೆ, ಬೆಲೆ ಸಿಗದೆ ರಸ್ತೆ ಬದಿ ಎಸೆದೆ! ಹೂ ಬೆಳೆದ ರೈತನ ನೋವು - ಬಾಗೇಪಲ್ಲಿ ವ್ಯಾಪ್ತಿ
ಚಿಕ್ಕಬಳ್ಳಾಪುರ: ಹಬ್ಬಗಳು ಬಂತಂದ್ರೆ ಸಾಕು, ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಹೂಗಳು ಎಲ್ಲರನ್ನೂ ಸ್ವಾಗತಿಸುತ್ತವೆ. ಆದರೆ ಜಿಲ್ಲೆಯಿಂದ ನೆರೆರಾಜ್ಯ ಆಂಧ್ರ ಪ್ರದೇಶಕ್ಕೆ ರಫ್ತಾಗುವ ಹೂಗಳನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಸುರಿದು ಹೋದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ. ಬರದನಾಡಲ್ಲಿ ರೈತರು ಬೆಳೆ ಬೆಳೆಯಲು ಸಾಲ ಮಾಡಿ ಸಾಕಷ್ಟು ಶ್ರಮ ಹಾಕಿರುತ್ತಾರೆ. ಅದ್ರಲ್ಲೂ ಹಬ್ಬಗಳ ಸಂದರ್ಭದಲ್ಲಿ ಬಂಪರ್ ಬೆಲೆ ಸಿಗುತ್ತೆಂದು ಎಲ್ಲಾ ಬೆಳೆಗಳನ್ನು ಪಕ್ಕಕ್ಕಿಟ್ಟು ರೈತರು ಹೂ ಬೆಳೆದು ಮಾರುಕಟ್ಟೆಗೆ ಬಿಟ್ಟು ಅದೃಷ್ಟ ಪರೀಕ್ಷಿಸಿಕೊಳ್ಳಲಾಗುತ್ತೆ. ಆದರೆ ಈ ಬಾರಿ ಹೂಗಳಿಗೆ ಬೆಲೆಯಿಲ್ಲ. ಟನ್‌ಗಟ್ಟಲೆ ಹೂಗಳು ನೆರೆ ರಾಜ್ಯಗಳಿಗೆ ರಫ್ತಾಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿರುವ ರೈತರಿಗೆ ಆಘಾತವಾಗಿದೆ. ಇದರಿಂದ ದಿಕ್ಕುತೋಚದ ರೈತರು ಹೂಗಳನ್ನು ರಸ್ತೆ ಬಳಿ ಸುರಿದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.